ಪಿಎಚ್.ಡಿ ಸಂಶೋಧನೆ ಆರಂಭಿಸಿ ಆರ್ಥಿಕ ಒತ್ತಡ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ಇದು ನಿಮಗೆ ಬಹಳ ಉಪಯುಕ್ತ ಸುದ್ದಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2025-26ನೇ ಸಾಲಿನಲ್ಲಿ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿರುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹10,000 ವ್ಯಾಸಂಗ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಈ ಫೆಲೋಶಿಪ್ ಗರಿಷ್ಠ 3 ವರ್ಷಗಳ ಅವಧಿಗೆ ಲಭ್ಯವಿದ್ದು, ಸಂಶೋಧನಾ ವಿದ್ಯಾರ್ಥಿಗಳಿಗೆ ದೊಡ್ಡ ಆರ್ಥಿಕ ಬೆಂಬಲವಾಗಲಿದೆ.
| ಯೋಜನೆ ಹೆಸರು | ಅರ್ಹತೆ | ಫೆಲೋಶಿಪ್ | ಕೊನೆಯ ದಿನಾಂಕ |
|---|---|---|---|
| BCWD PhD Fellowship 2025-26 | ಪೂರ್ಣಾವಧಿ ಪಿಎಚ್.ಡಿ (ಪ್ರಥಮ ವರ್ಷ) | ₹10,000 / ತಿಂಗಳು | ಜನವರಿ 09, 2026 |
- ಇಲಾಖೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD)
- ಅರ್ಜಿ ವಿಧಾನ: ಆಫ್ಲೈನ್
- ಫೆಲೋಶಿಪ್ ಅವಧಿ: ಗರಿಷ್ಠ 03 ವರ್ಷಗಳು
- ಅನ್ವಯಿಸುವ ವರ್ಗಗಳು: ಪ್ರವರ್ಗ-I, II(ಎ), III(ಎ), III(ಬಿ)
Also Read: ಹೈಕೋರ್ಟ್ನಲ್ಲಿ ಕೆಲಸ ಖಾಲಿ ಇದೆ: ಕಾನೂನು ಪದವೀಧರರಿಗೆ ಸುವರ್ಣಾವಕಾಶ – ಡಿ.31 ರೊಳಗೆ ಅಪ್ಲೈ ಮಾಡಿ
ಅರ್ಹತಾ ಮಾನದಂಡ (Eligibility Criteria)
ಈ ಯೋಜನೆಯ ಸೌಲಭ್ಯ ಪಡೆಯಲು ಅಭ್ಯರ್ಥಿಗಳು ಕೆಲವು ಪ್ರಮುಖ ಅರ್ಹತಾ ನಿಯಮಗಳನ್ನು ಕಡ್ಡಾಯವಾಗಿ ಪೂರೈಸಬೇಕು.
ಸಾಮಾನ್ಯ ಅರ್ಹತೆ
- ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
- ಹಿಂದುಳಿದ ವರ್ಗಗಳ **ಪ್ರವರ್ಗ-I, II(ಎ), III(ಎ) ಅಥವಾ III(ಬಿ)**ಗೆ ಸೇರಿರಬೇಕು
- ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅನುದಾನಿತ ಅಥವಾ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಉದ್ಯೋಗಿಗಳು ಅರ್ಹರಲ್ಲ
- ಒಂದೇ ಕುಟುಂಬದ ಗರಿಷ್ಠ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು (ಹೆಣ್ಣು ಮಕ್ಕಳಿಗೆ ಮಿತಿ ಇಲ್ಲ)
ಆದಾಯ ಮಿತಿ
- ಪ್ರವರ್ಗ-I ಅಭ್ಯರ್ಥಿಗಳಿಗೆ ವಾರ್ಷಿಕ ಆದಾಯ: ₹4.50 ಲಕ್ಷ
- ಪ್ರವರ್ಗ-II(ಎ), III(ಎ), III(ಬಿ): ₹3.50 ಲಕ್ಷ
ಪಿಎಚ್.ಡಿ ಅಧ್ಯಯನ ಅರ್ಹತೆ
- 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿರಬೇಕು
- ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯ ಅಥವಾ ಅಧೀನ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿರಬೇಕು
- ಪಿಎಚ್.ಡಿ ನೋಂದಣಿ ದಿನಾಂಕವು 09-01-2026ಕ್ಕೆ ಹಿಂದಿನ 2 ವರ್ಷದೊಳಗಿರಬೇಕು
- ಯಾವುದೇ ಇತರೆ ಫೆಲೋಶಿಪ್ ಅಥವಾ ವೇತನ ಪಡೆಯುತ್ತಿರುವವರು ಅರ್ಹರಲ್ಲ
Also read: SSLC ಪಾಸಾದವರಿಗೆ ರೈಲ್ವೆ ನೇಮಕಾತಿ: 22,000ಕ್ಕೂ ಹೆಚ್ಚು ಹುದ್ದೆಗಳು, ₹25,000 ಸಂಬಳ ಅವಕಾಶ
ಶೈಕ್ಷಣಿಕ ಹಾಗೂ ಪಿಎಚ್.ಡಿ ಅರ್ಹತೆ
- ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ
ಸಂಬಂಧಿತ ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು - ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯ ಅಥವಾ ಅಧೀನ ಸಂಸ್ಥೆಯಲ್ಲಿ
ಪೂರ್ಣಾವಧಿ ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿಕೊಂಡಿರಬೇಕು - ಪಿಎಚ್.ಡಿ ನೋಂದಣಿ ದಿನಾಂಕವು 09-01-2026ಕ್ಕೆ ಹಿಂದಿನ 2 ವರ್ಷಗಳ ಒಳಗೆ ಇರಬೇಕು
- ಯಾವುದೇ ಕೇಂದ್ರ/ರಾಜ್ಯ ಸರ್ಕಾರದ ಫೆಲೋಶಿಪ್ ಅಥವಾ ವೇತನ ಪಡೆಯುತ್ತಿರುವವರು ಅರ್ಹರಲ್ಲ
ವಯೋಮಿತಿ
- ಗರಿಷ್ಠ ವಯಸ್ಸು: 35 ವರ್ಷ
- ವಯಸ್ಸು ಲೆಕ್ಕಾಚಾರ: 09-01-2026
ವೇತನ / ಫೆಲೋಶಿಪ್ ವಿವರ
- ಪ್ರತಿ ತಿಂಗಳು ₹10,000 ವ್ಯಾಸಂಗ ವೇತನ
- ಗರಿಷ್ಠ 03 ವರ್ಷಗಳವರೆಗೆ ಪಾವತಿ
- ಹಾಜರಾತಿ ಆಧಾರವಾಗಿ ಮಾಸಿಕವಾಗಿ ಹಣ ವರ್ಗಾವಣೆ
- ಪಿಎಚ್.ಡಿ ಅಧ್ಯಯನವನ್ನು ಮಧ್ಯದಲ್ಲಿ ಕೈಬಿಟ್ಟಲ್ಲಿ, ಪಡೆದ ಮೊತ್ತವನ್ನು ಸರ್ಕಾರಕ್ಕೆ ಮರಳಿಸಬೇಕು
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಕೆಳಗಿನ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ:
- ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳು
- ಪ್ರವರ್ಗವಾರು ಮೀಸಲಾತಿ
- ಸರ್ಕಾರದಿಂದ ಲಭ್ಯವಾಗುವ ಅನುದಾನ
ಅರ್ಜಿ ಸಲ್ಲಿಸುವ ವಿಧಾನ (Offline Apply Process)
- BCWD ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
- PhD Fellowship 2025-26 ಅರ್ಜಿ ನಮೂನೆ ಡೌನ್ಲೋಡ್ ಮಾಡಿ
- ಅರ್ಜಿ ಮುದ್ರಿಸಿ ಸಂಪೂರ್ಣವಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಲಗತ್ತಿಸಿ
- ₹100 ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಂಲಗ್ನಗೊಳಿಸಿ
- ಎಲ್ಲಾ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಸಿದ್ಧಪಡಿಸಿ
- ಸಂಬಂಧಿತ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಗೆ
ಜನವರಿ 09, 2026ರೊಳಗೆ ಸಲ್ಲಿಸಿ
Also Read: ಜಸ್ಟ್ 12th ಪಾಸ್ ಆಗಿದ್ರೆ ಸಾಕು: CBSE ನಲ್ಲಿ 124 ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಹಾಕಿ
ಅಗತ್ಯ ದಾಖಲೆಗಳು
- ಭಾವಚಿತ್ರ – 2
- SSLC / 10ನೇ ತರಗತಿ ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಾಸಸ್ಥಳ ಪ್ರಮಾಣ ಪತ್ರ
- ಸ್ನಾತಕೋತ್ತರ ಪದವಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ
- ಪಿಎಚ್.ಡಿ ನೋಂದಣಿ ಪ್ರಮಾಣ ಪತ್ರ
ಹೆಚ್ಚಿನ ಮಾಹಿತಿಗಾಗಿ
- ಸಹಾಯವಾಣಿ: 8050770004
- ಅಧಿಕೃತ ಜಾಲತಾಣ: BCWD Karnataka
Skip to content

















